ಪ್ರಸಿದ್ಧ ಯಾತ್ರಾಸ್ಥಳ. ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರಕ್ಕೆ ಎಂಟು ಮೈಲಿ ದೂರದಲ್ಲಿದೆ. ಇಲ್ಲಿಯ ದೇವರು ಸುಬ್ರಹ್ಮಣ್ಯೇಶ್ವರ. ಈ ದೇವರ ಪುಜೆ ವಿಶೇಷವಾಗಿರುವುದು ದಕ್ಷಿಣ ಭಾರತದಲ್ಲೇ. ತಮಿಳುನಾಡಿನಲ್ಲಿ ಪಳನಿಯೂ ಈ ದೇವರ ಪುಣ್ಯಕ್ಷೇತ್ರವಾಗಿದೆ. ಪುತ್ರಸಂತಾನವಿಲ್ಲದವರು ಘಾಟಿ ಸುಬ್ರಹ್ಮಣ್ಯಕ್ಕೆ ಬಂದು ನಾಗರಪ್ರತಿಷ್ಠೆ ಮಾಡುತ್ತಾರೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶದವರು ತಮ್ಮ ಚೌಲಸಂಸ್ಕಾರವನ್ನು ಇಲ್ಲಿ ನಡೆಸುತ್ತಾರೆ. ಈಚಿನ ಕಾಲದಲ್ಲಿ ಉಪನಯನಗಳೂ ವಿವಾಹಗಳೂ ನಡೆಯುತ್ತಿವೆ. ನಾಗರ ಪಂಚಮಿ, ಸುಬ್ಬರಾಯನ ಷಷ್ಠಿಗಳಂದು ಇಲ್ಲಿ ವಿಶೇಷಪುಜೆ ಮತ್ತು ಉತ್ಸವಗಳು ನಡೆಯುತ್ತವೆ. ಕ್ಷೇತ್ರಕ್ಕೆ ಬಸ್ಸು ಸೌಕರ್ಯವಿದೆ. ಯಾತ್ರಿಕರು ಇಳಿದುಕೊಳ್ಳಲು ಛತ್ರಗಳಿವೆ.	(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ